ನಮ್ಮ ಚಾನಲ್

ಪಾಸಿಟಿವ್‌ ತಮ್ಮಯ್ಯ – ಯೂಟ್ಯೂಬ್ ಚಾನಲ್ : ಆರೋಗ್ಯಕರ ಕೃಷಿ (ಸಹಜ ಕೃಷಿ / ಸಾವಯವ ಕೃಷಿ), ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕುರಿತು ಅರಿವು ಮೂಡಿಸುತ್ತಿರುವ ಡಿಜಿಟಲ್ ವೇದಿಕೆ. ಉಪನ್ಯಾಸ, ಸಹಜ ಕೃಷಿ ಮತ್ತು ಕ್ಷೇಮ ತರಬೇತಿ ಮತ್ತದರ ಪ್ರಾಯೋಗಿಕ ಫಲಿತಾಂಶಗಳ ಪ್ರತ್ಯಕ್ಷ ದರ್ಶನ. ಸಹಜ ಜೀವನಕ್ಕಾಗಿ ಜನಾಂದೋಲನ. ಪಾಸಿಟಿವ್ ತಮ್ಮಯ್ಯ (ಪಿ.ಪಿ. ತಮ್ಮಯ್ಯ) ವ್ಯಕ್ತಿಯಾಗಿ, ಶಕ್ತಿಯಾಗಿ, ಸದ್ಗುರುವಿನ ಶಿಷ್ಯರಾಗಿ ಸಾಂಪ್ರದಾಯಿಕ ಜ್ಞಾನ ಮತ್ತು ಸಹಜ ಜೀವನಾನುಭವವನ್ನು ಕಡೆದು ತೆಗೆದ ಜ್ಞಾನಾಮೃತವನ್ನು ಈ ನವ ಮಾಧ್ಯಮ ಮೂಲಕ ಉಣ ಬಡಿಸುತ್ತಿದ್ದಾರೆ. ʻವಸುಧೈವ ಕುಟುಂಬಕಂʼ ಎಂಬಂತೆ ಪಾಸಿಟಿವ್‌ ತಮ್ಮಯ್ಯ ಅವರು ತಮ್ಮ ಜೀವನವನ್ನು ಶ್ರೀಸಾಮಾನ್ಯರ, ರೈತರ ತರಬೇತಿ ಮತ್ತು ಶಿಕ್ಷಣಕ್ಕಾಗಿ ಮುಡುಪಾಗಿಟ್ಟಿದ್ದಾರೆ. ನೈಸರ್ಗಿಕ, ಸುಸ್ಥಿರ ಕೃಷಿಯನ್ನು ವಿನ್ಯಾಸಗೊಳಿಸುತ್ತಾ ಅಭಿವೃದ್ಧಿಪಡಿಸುತ್ತಾ ಸನ್ಮಾರ್ಗ ನಿರ್ಮಿಸುತ್ತಿದ್ದಾರೆ.